ಅಗಿಂದಾಗ್ಗೆ ಕೇಳುವ ಪ್ರಶ್ನೆಗಳು

ಸಾವಯವ ಪ್ರಮಾಣೀಕರಣ ಎಂದರೇನು?
       ರಾಷ್ಟ್ರೀಯ ಸಾವಯವ ಮಾನದಂಡಗಳ ಅನ್ವಯ ಉತ್ಪಾದನೆ ಹಾಗೂ ಸಂಸ್ಕರಣೆಗೊಂಡ ಸಾವಯವ ಉತ್ಪನ್ನಗಳನ್ನು ಮಾನ್ಯತೆ ಪಡೆದ ಪ್ರಮಾಣೀಕರಣ ಸಂಸ್ಥೆಯವತಿಯಿಂದ ಪ್ರಮಾಣೀಕರಿಸುವ ವಿಧಾನಕ್ಕೆ ಸಾವಯವ ಪ್ರಮಾಣೀಕರಣ ಎನ್ನುತ್ತಾರೆ.ಪರಿವರ್ತನೆ ಅವಧಿ ಎಂದರೇನು?
       ಸಾವಯವ ನಿರ್ವಹಣಾ ಪದ್ಧತಿ ಪ್ರಾರಂಭವಾದಾಗಿನಿಂದ ಸಾವಯವ ಪ್ರಮಾಣೀಕರಣ ಹಂತದವರೆಗಿನ ಅವಧಿಯನ್ನು ಪರಿವರ್ತನ ಅವಧಿ ಎನ್ನುತ್ತಾರೆ.ಪರಿವರ್ತನೆ ಎಂದರೇನು?
       ಕೃಷಿ ಕ್ಷೇತ್ರವು ಆಧುನಿಕ ಬೇಸಾಯ ಪದ್ಧತಿಯಿಂದ ಸಾವಯವ ಕೃಷಿ ಪದ್ಧತಿಗೆ ಮಾರ್ಪಾಟುಗೊಳ್ಳುವುದಕ್ಕೆ ಪರಿವರ್ತನೆ ಎಂದು ಕರೆಯುತ್ತಾರೆ.ನಿರೀಕ್ಷಣೆ ಎಂದರೇನು?
       ಸಾವಯವ ಮಾನದಂಡಗಳ ಅನ್ವಯ ಸಂಬಂಧಪಟ್ಟ ರೈತರು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂದು ಕ್ಷೇತ್ರಕ್ಕೆ ಭೇಟಿ ನೀಡಿ ಪರಿವೀಕ್ಷಿಸುವ ವಿಧಾನಕ್ಕೆ ನಿರೀಕ್ಷಣೆ ಎನ್ನುತ್ತಾರೆ.ಸಮಾನಾಂತರ ಕೃಷಿ ಉತ್ಪಾದನೆ ಎಂದರೇನು?
       ಒಬ್ಬರೇ ರೈತರು ಸಾವಯವ ಕೃಷಿ ಪದ್ಧತಿ ಹಾಗೂ ಆಧುನಿಕ ಪದ್ಧತಿಯಲ್ಲಿ ಕ್ಷೇತ್ರದಲ್ಲಿ ಏಕಕಾಲದಲ್ಲಿ ಒಂದೇ ಕ್ಷೇತ್ರ ಅಥವಾ ಬೇರೆ ಬೇರೆ ಕ್ಷೇತ್ರದಲ್ಲಿ ಒಂದೇ ವಿಧವಾದ ಬೆಳೆಯನ್ನು ಬೆಳೆಯುವ ವಿಧಾನಕ್ಕೆ ಸಮಾನಾಂತರ ಕೃಷಿ ಉತ್ಪಾದನೆ ಎನ್ನುತ್ತಾರೆ. ಇದೇ ನಿಯಮವು ಒಂದೇ ಭಾಗದಲ್ಲಿರುವ ಪ್ರಮಾಣೀಕೃತ ಸಾವಯವ ಕೃಷಿ ಕ್ಷೇತ್ರ ಹಾಗೂ ಪರಿವರ್ತನೆಗೊಳ್ಳುತ್ತಿರುವ ಸಾವಯವ ಕೃಷಿ ಕ್ಷೇತ್ರಕ್ಕೂ ಅನ್ವಯಿಸುತ್ತದೆ.


ಸಾವಯವ ರೈತರು ಸಾವಯವ ಪ್ರಮಾಣೀಕರಣವನ್ನು ದುರುಪಯೋಗ ಮಾಡಿಕೊಂಡರೆ ನೀಡುವ ದಂಡನೆ ಏನು ?
       ಸಾವಯವ ರೈತರು ತಮಗೆ ತಿಳಿದೊ/ತಿಳಿಯದೆ ಪ್ರಮಾಣೀಕರಣವನ್ನು ದುರುಪಯೋಗ ಮಾಡಿಕೊಂಡಲ್ಲಿ ಅಂತಹ ಪ್ರಮಾಣೀಕರಣವನ್ನು ರದ್ದುಗೊಳಿಸಲಾಗುತ್ತದೆ .
ಕ.ರಾ.ಸಾ.ಪ್ರ.ಸಂ (KSOCA) ಎಂದರೇನು?
       ಕರ್ನಾಟಕ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆ (Karnataka State Organic Certification Agency).NPOP ಎಂದರೇನು?
       ಭಾರತ ಸರ್ಕಾರದ ವ್ಯಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ,ನವದೆಹಲಿ ಇವರಿಂದ ಸ್ಥಾಪಿತವಾದ ರಾಷ್ಟ್ರೀಯ ಸಾವಯವ ಉತ್ಪಾದನೆ ಯೋಜನೆ (National Program for Organic Production).NSOP ಎಂದರೇನು?
       ರಾಷ್ಟ್ರೀಯ ಸಾವಯವ ಉತ್ಪನ್ನ ಮಾನದಂಡಗಳು (National Standards of Organic Production).ಸಾಂದ್ರ ರಾಸಾಯನಿಕ ಕೃಷಿ ಪದ್ಧತಿ ಎಂದರೇನು?
       ಸಾವಯವ ಉತ್ಪನ್ನ ಮಾನದಂಡಗಳಿಗೆ ಸಾಮ್ಯತೆ ಇರದ ಕೃತಕ ಗೊಬ್ಬರಗಳು, ಕೀಟ, ರೋಗ ಹಾಗೂ ಕಳೆನಾಶಕಗಳ ಬಳಕೆಯ ಮೇಲೆ ಅವಲಂಬಿತವಾಗಿರುವ ಕೃಷಿ ಪದ್ಧತಿಗೆ ಸಾಂದ್ರ ಕೃಷಿ ಪದ್ಧತಿ ಎನ್ನುತ್ತಾರೆ.ಸಾವಯವ ಕೃಷಿ ಎಂದರೇನು?
       ಒಂದು ಸಮಗ್ರ ಕೃಷಿ ಉತ್ಪಾದನಾ ನಿರ್ವಹಣಾ ಪದ್ಧತಿಯಾಗಿದ್ದು, ಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಂಡು ಬರುವುದು ಹಾಗೂ ಪರಿಸರ ಸ್ನೇಹಿ ಜೈವಿಕ ವಿಧಾನಗಳಿಂದ ಕೀಟ ಮತ್ತು ರೋಗಗಳ ನಿರ್ವಹಣೆ ಕೈಗೊಂಡು ಉತ್ತಮ ಗುಣಮಟ್ಟದ ವಿಷ ವಸ್ತುಗಳ ಶೇಷಾಂಶವಿಲ್ಲದ ಆಹಾರ ಉತ್ಪಾದನೆ ಕೈಗೊಳ್ಳುವ ಬೇಸಾಯ ಪದ್ಧತಿ.ಪ್ರಮಾಣೀಕೃತ ಸಾವಯವ ಬೆಳೆಗಳನ್ನು ಬೆಳೆಯಲು ಭೌಗೋಳಿಕ ಮಿತಿಯನ್ನು ನಿಗಧಿಪಡಿಸಲಾಗಿದೆಯೇ?
        ಪ್ರಮಾಣೀಕೃತ ಸಾವಯವ ಬೆಳೆಗಳನ್ನು ಬೆಳೆಯಲು ಯಾವುದೇ ಭೌಗೋಳೀಕ ಮಿತಿಯನ್ನು ನಿಗಧಿಪಡಿಸಲಾಗಿಲ್ಲ.ಸಾವಯವ ಪ್ರಮಾಣನ ಪತ್ರದ ಸಿಂಧುತ್ವ ಅವಧಿಯು ಎಷ್ಟು?
       ಸಿಂಧುತ್ವವು ಸಾವಯವ ಪ್ರಮಾಣನ ಪತ್ರವನ್ನು ನೀಡಿದ ದಿನಾಂಕದಿಂದ
1ವರ್ಷದ ಅವಧಿಯವರೆಗೆ ಇರುತ್ತದೆ.
ಪ್ರಮಾಣನ ಸಂಸ್ಥೆಯು ಸಾವಯವ ಕೃಷಿ ಕ್ಷೇತ್ರವನ್ನು ಯಾವ ಕಾಲದಲ್ಲಿ/ಯಾವ ಅಂತರದಲ್ಲಿ ನಿರೀಕ್ಷಣೆಯನ್ನು ಕೈಗೊಳ್ಳುತ್ತದೆ?
       ಪ್ರತಿ ವರ್ಷಕ್ಕೆ ಒಂದು ನಿರೀಕ್ಷಣೆಯನ್ನು ಕಡ್ಡಾಯವಾಗಿ ರೈತರಿಗೆ ತಿಳಿಸಿ ನಿರೀಕ್ಷಣೆ ಕೈಗೊಳ್ಳಲಾಗುವುದು. ವಿಶೇಷ ಸಂದರ್ಭಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ನಿರೀಕ್ಷಣೆ ಕೈಗೊಳ್ಳಬಹುದು.
ಆಂತರಿಕ ನಿಯಂತ್ರಣ ಪದ್ಧತಿ ಎಂದರೇನು?
       ಸಾವಯವ ಪ್ರಮಾಣನ ಸಂಸ್ಥೆಯು ನೊಂದಾಯಿತ ರೈತರ ಗುಂಪಿನಲ್ಲಿರುವ ಕೆಲವು ಸದಸ್ಯರುಗಳಿಗೆ ಗುಂಪಿನಲ್ಲಿರುವ ಎಲ್ಲಾ ರೈತರ ಕೃಷಿ ಕ್ಷೇತ್ರಗಳನ್ನು ಪರಿವೀಕ್ಷಿಸಿ ಲಿಖಿತ ರೂಪದಲ್ಲಿ ಗುಣಮಟ್ಟವನ್ನು ಕಾಪಾಡುವ ಅಧಿಕಾರವನ್ನು ನೀಡುವ ವ್ಯವಸ್ಥೆಗೆ ಆಂತರಿಕ ನಿಯಂತ್ರಣ ಪದ್ಧತಿ ಎಂದು ಕರೆಯುತ್ತಾರೆ.
ವ್ಯವಹಾರಿಕ/ಆಮದು ಪ್ರಮಾಣ ಪತ್ರ ಎಂದರೇನು?
       NSOP ಮಾನದಂಡದ ಪ್ರಕಾರ ಉತ್ಪಾದಿಸಿದ ಉತ್ಪನ್ನ/ಸಂಸ್ಕರಿಸಿದ ದಾಸ್ತಾನಿಗೆ ಪ್ರಮಾಣನ ಸಂಸ್ಥೆಯ ವತಿಯಿಂದ ಲಿಖಿತ ರೂಪದಲ್ಲಿ ನೀಡುವ ಪ್ರಮಾಣನ ಪತ್ರಕ್ಕೆ ವ್ಯವಹಾರಿಕ ಪ್ರಮಾಣ ಪತ್ರ ಎನ್ನುತ್ತಾರೆ.
ಸಾವಯವ ಆಹಾರ ಉತ್ಪನ್ನಗಳ ಸಂಸ್ಕರಣೆಯಲ್ಲಿ ಇರಾಡಿಯೇಷನ್ ಪದ್ಧತಿಯನ್ನು ಬಳಸಬಹುದೆ?
        ಸಾವಯವ ಆಹಾರ ಉತ್ಪನ್ನಗಳ ಸಂಸ್ಕರಣೆಯಲ್ಲಿ ಇರಾಡಿಯೇಷನ್ ಪದ್ಧತಿಯನ್ನು ಬಳಸುವಂತಿಲ್ಲ.
ಭಾಗಶಃ ಪರಿವರ್ತನೆ ಎಂದರೆನು?
       ರೈತರ ಒಟ್ಟು ಕೃಷಿ ಕ್ಷೇತ್ರದಲ್ಲಿ ಕೆಲವೊಂದು ಭಾಗವನ್ನು ಸಾವಯವ ಕೃಷಿ ಪದ್ಧತಿಗೆ ಅಳವಡಿಸುವ ವಿಧಾನಕ್ಕೆ ಭಾಗಶಃ ಪರಿವರ್ತನೆ ಎನ್ನುತ್ತಾರೆ. ಉಳಿದ ಭಾಗವನ್ನು ಸಾವಯವ ಕೃಷಿ ಪದ್ಧತಿಗೆ ಹಂತ ಹಂತವಾಗಿ ಪರಿವರ್ತನೆ ಮಾಡಲಾಗುತ್ತದೆ.
ರಾಷ್ಟ್ರೀಯ ಸಾವಯವ ಕೃಷಿ ಉತ್ಪಾದನೆಯ ನಿಯಮಾವಳಿಗಳನ್ನು ಎಲ್ಲಿಂದ/ಯಾರಿಂದ ಪಡೆಯಬಹುದು?
       ನೀವು ಕ.ರಾ.ಸಾ.ಪ್ರ.ಸಂಸ್ಥೆ ವತಿಯಿಂದ ನೇರವಾಗಿ ಅಥವಾ ಅಂರ್ತಜಾಲದಲ್ಲಿ (www.apeda.com) ವೆಬ್ಸೈಟ್ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು.
ಕೃಷಿ ಕ್ಷೇತ್ರವು ಸಾವಯವ ಪ್ರಮಾಣೀಕರಣ ಹಂತಕ್ಕೆ ಬರಲು ಎಷ್ಟು ಕಾಲಾವಕಾಶ ಬೇಕಾಗುತ್ತದೆ.?
       ಪ್ರಮಾಣೀಕರಣಕ್ಕೆ ನೊಂದಾವಣಿಯಾದ ದಿನಾಂಕದಿಂದ ವಾರ್ಷಿಕ ಬೆಳೆಗಳಿಗೆ
2 ವರ್ಷಗಳ ಕಾಲ (ಬಿತ್ತನೆಗೆ ಮುನ್ನ) ಹಾಗೂ ಬಹುವಾರ್ಷಿಕ ಬೆಳೆಗಳಿಗೆ 3 ವರ್ಷಗಳ ಕಾಲ ಕಟಾವಿಗೆ ಮುನ್ನ ಇರುತ್ತದೆ. ವಿಶೇಷ ಸಂದರ್ಭಗಳಲ್ಲಿ ಕೃಷಿ ಕ್ಷೇತ್ರದ ಇತಿಹಾಸವನ್ನು (ಬಂಜರು ಭೂಮಿ, ನೈಸರ್ಗಿಕ ಕೃಷಿ ಕ್ಷೇತ್ರ ಇತ್ಯಾದಿ) ವಿವಿಧ ಮೂಲಗಳಿಂದ ಪಡೆದು ಖಚಿತ ಪಡಿಸಿಕೊಂಡ ನಂತರ ಪರಿವರ್ತನ ಅವಧಿಯನ್ನು
12ತಿಂಗಳಿಗೆ ಕಡಿಮೆ ಇಲ್ಲದಂತೆ ಕಡಿತಗೊಳಿಸಲಾಗುವುದು.
ಸಾವಯವ ಉತ್ಪನ್ನಗಳಿಗೆ ಬಳಸುವ ಲೇಬಲ್ಲನ್ನು ಮುದ್ರಿಸುವ ಮುನ್ನ ಯಾರಿಂದ ಅನುಮತಿ ಪಡೆಯಬೇಕು ?
       ಕ.ರಾ.ಸಾ.ಪ್ರ.ಸಂಸ್ಥೆಯು NPOP/NOP ಮಾರ್ಗಸೂಚಿಗಳ ಅನ್ವಯ ಸಾವಯವ ಉತ್ಪನ್ನಗಳಿಗೆ ಬಳಸುವ ಲೇಬಲ್ಲನ್ನು ಮುದ್ರಿಸಲು ಅನುಮತಿ ನೀಡಲಾಗುವುದು.
Copyright © 2013 ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ | Designed by Nexusinfo