KSOCA ಸಂಸ್ಥೆಯ ಬಗ್ಗೆ  ಕರ್ನಾಟಕ ರಾಜ್ಯ ಬೀಜ ಪ್ರಮಾಣನ ಸಂಸ್ಥೆ (KSSCA) ಯು 1974 ನೇ ಸಾಲಿನಲ್ಲಿ  ಕರ್ನಾಟಕ ಸರ್ಕಾರದ ಒಂದು ಸ್ವಾಯುತ್ತ ಸಂಸ್ಥೆಯಾಗಿ ಕೇಂದ್ರ ಬೀಜ ಕಾಯಿದೆ-1966 ರ ಅಡಿಯಲ್ಲಿ ಸ್ಥಾಪಿಸಿದೆ. ಸೊಸೈಟಿ ನೊಂದಣಿ ಕಾಯಿದೆ-1960 ರ ಅಡಿಯಲ್ಲಿ ನೊಂದಾಯಿಸಲ್ಪಟ್ಟಿದ್ದು, ರಾಜ್ಯದಲ್ಲಿ ಬೆಳೆಯುವ ವಿವಿಧ ಅಧಿಸೂಚಿತ ತಳಿ ಬೆಳೆಗಳ ಬೀಜಗಳನ್ನು ಪ್ರಮಾಣೀಕರಿಸಿ ರೈತ ಬಾಂಧವರಿಗೆ ಸಕಾಲದಲ್ಲಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜವನ್ನು ಒದಗಿಸುವಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆ.

  ಕರ್ನಾಟಕ ರಾಜ್ಯದಲ್ಲಿ ಸಾವಯವ ಬೆಳೆ/ಉತ್ಪನ್ನಗಳ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದ್ದು ಇವುಗಳ ಗುಣಮಟ್ಟವನ್ನು ಖಾತರಿ ಪಡಿಸಲು ಸರ್ಕಾರಿ ಸ್ವಾಮ್ಯದ ಸಂಸ್ಥೆ ಇಲ್ಲದಿರುವುದನ್ನು ಮನಗಂಡು ಘನ ಸರ್ಕಾರದ ಆದೇಶ ಸಂಖ್ಯೆ : ಕೃ.ಇ.50. ಎಎಇ. 2012, ಬೆಂಗಳೂರು ದಿನಾಂಕ.04.01.2013ರ ಪ್ರಕಾರ ಕರ್ನಾಟಕ ರಾಜ್ಯ ಬೀಜ ಪ್ರಮಾಣನ ಸಂಸ್ಥೆಯು,ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ (KSSOCA) ಎಂದು ಮರು ನಾಮಕರಣಗೊಂಡು ಇದರ ಅಡಿಯಲ್ಲಿ ಕರ್ನಾಟಕ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆ (KSOCA)ಯು ಒಂದು ವಿಭಾಗವಾಗಿ ಸ್ಥಾಪಿತವಾಗಿದೆ.

  KSSCA ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸಾವಯವ ಪ್ರಮಾಣನ ವಿಭಾಗಕ್ಕೆ APEDA ಮಾರ್ಗಸೂಚಿ ಪ್ರಕಾರ ವಿವಿಧ  ದರ್ಜೆಯ  ನೌಕರರ ಸಂಖ್ಯೆಗಳಿಗನುಗುಣವಾಗಿ ಹೊಸದಾಗಿ ಸೃಜಿಸಿ ವೃತ್ತಿಪರ ಹಾಗೂ ತಾಂತ್ರಿಕ ಕೌಶಲ್ಯವುಳ್ಳ ಏಳು ತಾಂತ್ರಿಕ ಅಧಿಕಾರಿಗಳು ಹಾಗೂ ನಾಲ್ಕು ಲಿಪಿಕ/ಇತರೆ ಸಿಬ್ಬಂದಿಗಳನ್ನು ನೇಮಕಮಾಡಿ, ಸದರಿ ಅಧಿಕಾರಿಗಳಿಗೆ ಸಾವಯವ ಪ್ರಮಾಣೀಕರಣದ ಬಗ್ಗೆ ಸೂಕ್ತ ತರಬೇತಿ ನೀಡಲಾಗಿರುತ್ತದೆ.National Accreditation Board (NAB), £ÀªÀ zɺÀ°, ¨sÁgÀvÀ ¸ÀPÁðgÀ ªÀw¬ÄAzÀ ¸ÁªÀAiÀĪÀ ¥ÀæªÀiÁtÂÃPÀgÀtªÀ£ÀÄß PÉÊUÉƼÀî®Ä ¢£ÁAPÀ: 17.08.2015 jAzÀ eÁjUÉ §gÀĪÀAvÉ KSOCA ¸ÀA¸ÉÜUÉ Accreditation zÉÆgÀQgÀÄvÀÛzÉ.

  KSOCA ಸಂಸ್ಥೆಯ ಉದ್ದೇಶಗಳು: ಸರ್ಕಾರ ಸ್ವಾಮ್ಯದ KSOCA ಸಂಸ್ಥೆಯು ರಾಜ್ಯದಲ್ಲಿ ಕೈಗೆಟುಕುವ ಪ್ರಮಾಣೀಕರಣ ಶುಲ್ಕದೊಂದಿಗೆ ರಾಷ್ಟ್ರೀಯ ( National Program for Organic Production(NPOP)) ಕಾರ್ಯ ಕೈಗೊಳ್ಳುವುದು.

ಪ್ರಮಾಣಿತ ಸಾವಯವ ಉತ್ಪನ್ನಗಳನ್ನು ದೊರಕಿಸಿಕೊಡುವಲ್ಲಿ ಸಹಕಾರಿಯಾಗುವುದು.

 ಸಾವಯವ ಕೃಷಿ ಕ್ಷೇತ್ರಗಳನ್ನು ಪ್ರಮಾಣೀಕರಿಸಲು ಅನುಸರಿಸಬೇಕಾದ ಕ್ರಮಗಳು

Copyright © 2013 ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ | Designed by Nexusinfo